ಕಿತ್ತು ತಿನ್ನುವ ಬಡತನ. ಒಪ್ಪತ್ತಿನ ಗಂಜಿಗೂ ಪರದಾಡುವ ಸ್ಥಿತಿ. ಕೂಲಿಯಿಂದಲೇ ಬದುಕು
ಸಾಗಬೇಕಿತ್ತು. ಮಗಳು ತಮ್ಮಂತೆಯೇ ಕೂಲಿ ಮಾಡಬಾರದು, ಬಡತನ ಶಿಕ್ಷಣಕ್ಕೆ ಅಡ್ಡಿಯಾಗಬಾರದು
ಎಂಬುದು ಪೋಷಕರ ನಿಲುವಾಗಿತ್ತು. ಮಗಳನ್ನು ಓದಿಸಿ ಅಧಿಕಾರಿಯನ್ನಾಗಿ ಮಾಡಬೇಕೆನ್ನುವ
ಹೆತ್ತವರ ಕನಸು ಕೊನೆಗೂ ಈಡೇರಿತು.
ಕೊಳೆಗೇರಿಯಲ್ಲಿ ಹುಟ್ಟಿದ ಬಾಲೆ ಬೆಳೆದು ದೊಡ್ಡವಳಾಗಿ ಕೆಎಎಸ್ ಪರೀಕ್ಷೆ ಪಾಸು ಮಾಡಿ
ಉನ್ನತ ಹುದ್ದೆಗೆ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಅಂದಹಾಗೆ ಇಲ್ಲಿ ಹೇಳಹೊರಟಿರುವುದು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ
ಕಂದಾಯ ಇಲಾಖೆಯಲ್ಲಿ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವ ಮೈಸೂರಿನ ಕೊಳೆಗೇರಿ
ಮಂಜುನಾಥಪುರದ ದಲಿತ ಕುಟುಂಬದಲ್ಲಿ ಜನಿಸಿದ ಅನಿತಾ ಲಕ್ಷ್ಮಿ ಅವರ ಸಾಧನೆಯ ಬಗ್ಗೆ. ಕೂಲಿ
ಮಾಡಿಕೊಂಡಿದ್ದ ಚಿಕ್ಕಆಂಜನಪ್ಪ, ಮರಿಸಿದ್ದಮ್ಮ ಅವರ ಏಕೈಕ ಪುತ್ರಿ ಅನಿತಾ ಲಕ್ಷ್ಮಿ.
ಬಡತನ ಹಾಸಿ ಹೊದ್ದುಕೊಳ್ಳುವಷ್ಟಿದ್ದರೂ ಮಗಳಿಗೆ ಲಕ್ಷ್ಮಿ ಎಂದೇ ಹೆಸರಿಟ್ಟರು.
ಹೆಣ್ಣು ಮಗಳೆಂದು ಹೆತ್ತವರು ಜರೆಯಲಿಲ್ಲ. ಕೀರ್ತಿಗೊಬ್ಬ ಬೇಕೆಂದು ಹಂಬಲಿಸಲಿಲ್ಲ. ಮಗಳು
ನಮ್ಮಂತೆಯೇ ಅನಕ್ಷರಸ್ಥಳಾಗಬಾರದು, ಚೆನ್ನಾಗಿ ಓದಿ ಒಳ್ಳೆಯ ಹುದ್ದೆ ಅಲಂಕರಿಸಿದರೆ
ಸಾಕು ಎಂಬುದು ಪೋಷಕರ ಬಯಕೆಯಾಗಿತ್ತು.
ಲಕ್ಷ್ಮಿ ಅವರಿಗೆ ಚಿಕ್ಕಂದಿನಿಂದಲೇ ಓದಿನ ಬಗ್ಗೆ ವಿಶೇಷ ಆಸಕ್ತಿ. ಸುತ್ತಮುತ್ತಲಿನ ಜನ
ಬಡತನದ ಬೇಗೆಯಲ್ಲಿ ಬೇಯುತ್ತಿದ್ದುದು ಇವರ ಮನಸ್ಸಿನ ಮೇಲೆ ಪರಿಣಾಮ ಬೀರತೊಡಗಿತು. ಅನಿತಾ
ಕೊಳೆಗೇರಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದರು.
ವಿ.ವಿ.ಮೊಹಲ್ಲಾದ ಮಾತೃ ಮಂಡಳಿಯಲ್ಲಿ ಪ್ರೌಢಶಾಲೆ, ಮಹಾರಾಣಿ ಕಾಲೇಜಿನಲ್ಲಿ ಪಿಯುಸಿ
ಮುಗಿಸಿದರು. ವೀರಾಜಪೇಟೆಯಲ್ಲಿ ಟಿಸಿಎಚ್ ಮುಗಿಸಿದ ಇವರು ಪ್ರಾಥಮಿಕ ಶಾಲಾ
ಶಿಕ್ಷಕಿಯಾದರು.
ಹೆತ್ತವರ ಹಂಬಲದಂತೆ ಓದಿ ಮುಂದೆ ದೊಡ್ಡ ಹುದ್ದೆ ಅಲಂಕರಿಸಬೇಕೆಂದು ಅನಿತಾ ಅವರ ಕನಸು
ಚಿಗರೊಡೆಯತೊಡಗಿತು. ಕೂಲಿ ಮಾಡುತ್ತಿದ್ದ ಹೆತ್ತವರಿಗೆ ನೆರವಾಗಿ ಮನೆಯಲ್ಲಿ
ಹಾಸುಹೊಕ್ಕಾಗಿದ್ದ ಬಡತನವನ್ನು ಹೊಡೆದೋಡಿಸಿ ಅಂದುಕೊಂಡ ಗುರಿ ಮುಟ್ಟಬೇಕೆಂದು ಪಣ
ತೊಟ್ಟರು.
ಶಿಕ್ಷಕಿಯಾಗಿ ದುಡಿಯುತ್ತಲೇ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ
ಬಿಎ, ಎಂಎ, ಬಿ.ಇಡಿ ಪದವಿ ಸಹ ಪಡೆದರು. ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು ಎಂಬ
ಸಾಧಕರ ಮಾತು ಅನಿತಾ ಅವರ ಕಿವಿಯಲ್ಲಿ ಗುನುಗುಡುತ್ತಿತ್ತು.
2003ನೇ ಸಾಲಿನಲ್ಲೇ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಆದ ಸೋದರ ಮಾವ
ಎಸ್.ಬಸವರಾಜು ಅವರನ್ನು ಅನಿತಾ ವರಿಸಿದರು. ದಂಪತಿಗೆ ಗಗನ್ ಎಂಬ ಮುದ್ದು ಮಗ ಜನಿಸಿದ.
ಕುಟುಂಬ ನಿರ್ವಹಣೆ, ಕೆಲಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದನ್ನು
ಆರಂಭಿಸಿದರು. 2008ರಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರು.
ಸಂದರ್ಶನಕ್ಕೆ ಸಹ ಹೋಗಿ ಬಂದರು. ಆದರೆ ಪ್ರಯೋಜನವಾಗಲಿಲ್ಲ.
ಹಣಕಾಸಿನ ತೊಂದರೆಯನ್ನು ನಿವಾರಿಸಿಕೊಳ್ಳುವ ಸಲುವಾಗಿ 2009ನೇ ಸಾಲಿನಲ್ಲಿ ಪ್ರಥಮ ದರ್ಜೆ
ಸಹಾಯಕ (ಎಫ್‌ಡಿಎ) ಹುದ್ದೆಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ಮೈಸೂರಿನ ಆಡಳಿತ
ತರಬೇತಿ ಸಂಸ್ಥೆಯಲ್ಲಿ (ಎಟಿಐ)ದಲ್ಲಿ ಎಫ್‌ಡಿಎ ಆಗಿ ಸೇವೆ ಆರಂಭಿಸಿದರು.
ಆದರೆ ಕೆಎಎಸ್ ಪರೀಕ್ಷೆಗೆ ಮತ್ತೆ ತಯಾರಿ ನಡೆಸಿದರು. ಮೈಸೂರಿನ `ಜ್ಞಾನಬುತ್ತಿ
ಸಂಸೆ`್ಥಯಲ್ಲಿ ತರಬೇತಿ ಸಹ ಪಡೆದರು. 2010ನೇ ಸಾಲಿನಲ್ಲಿ ಎದುರಿಸಿದ ಪರೀಕ್ಷೆ ಅನಿತಾ
ಅವರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ.
ರಾಜ್ಯದಲ್ಲಿ 23ನೇ ರ‌್ಯಾಂಕ್ ಗಳಿಸಿ ಕಂದಾಯ ಇಲಾಖೆಯಲ್ಲಿ ಉಪ ವಿಭಾಗಾಧಿಕಾರಿ
ಹುದ್ದೆಗೆ ಆಯ್ಕೆ ಆಗಿಯೇ ಬಿಟ್ಟರು. ಆದರೆ ಮಗಳು ಕೆಎಎಸ್ ಹುದ್ದೆಗೆ ಆಯ್ಕೆಯಾದ ವಿಷಯ
ಕೇಳಿ ಆನಂದಿಸುವ ಭಾಗ್ಯ ತಂದೆ ಚಿಕ್ಕ ಅಂಜನಪ್ಪ ಅವರಿಗೆ ಒದಗಿಬರಲಿಲ್ಲ.
2009ರಲ್ಲಿ ಚಿಕ್ಕ ಅಂಜನಪ್ಪ ಅನಾರೋಗ್ಯದಿಂದ ತೀರಿಕೊಂಡರು. ತಂದೆಯನ್ನು ಕಳೆದುಕೊಂಡ
ಕೊರಗು ಅವರನ್ನು ಕಾಡುತ್ತಿದೆ. ಆದರೆ ಅಪ್ಪನ ಆಸೆ ಈಡೇರಿಸಿದ ಸಂತೃಪ್ತಿ ಇದೆ.
ಮಂಜುನಾಥಪುರದಲ್ಲಿ ಬಹುತೇಕ ಮಂದಿ ಪೌರಕಾರ್ಮಿಕರೇ ಹೆಚ್ಚು. ಉಳಿದಂತೆ ಕೂಲಿ ಕೆಲಸಕ್ಕೆ
ಹೋಗುತ್ತಾರೆ. ಸ್ಲಂ ಎಂದ ಮೇಲೆ ಅಲ್ಲಿನ ಮಕ್ಕಳ ವಿದ್ಯಾಭ್ಯಾಸ ಕೇಳಬೇಕಾಗಿಲ್ಲ. ಪದವಿ
ಮಾಡಿದವರು ಬೆರಳೆಣಿಕೆಯಷ್ಟು.
ದುರ್ಬೀನು ಹಾಕಿ ಹುಡುಕಿದರೂ ಸರ್ಕಾರಿ ಹುದ್ದೆ ಅಲಂಕರಿಸಿದ ಹೆಣ್ಣುಮಕ್ಕಳು
ಸಿಗುವುದಿಲ್ಲ. ಆದರೆ ಮುಳ್ಳಿನ ಹಾದಿಯಲ್ಲೇ ನಡೆದು ಬಂದ ಅನಿತಾ ಲಕ್ಷ್ಮಿ ತಮ್ಮಲ್ಲಿದ್ದ
ಛಲದಿಂದಾಗಿ ಕೆಎಎಸ್ ಪರೀಕ್ಷೆ ಬರೆದು ಅಧಿಕಾರಿ ಹುದ್ದೆಗೆ ಆಯ್ಕೆಯಾಗಿ ಇತರರಿಗೆ
ಮಾದರಿಯಾಗಿದ್ದಾರೆ.
ನಮ್ಮ ನಡುವೆ ಇದ್ದ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು ಕೆಎಎಸ್ ಪರೀಕ್ಷೆ
ತೇರ್ಗಡೆಯಾಗಿ ಅಧಿಕಾರಿ ಆಗುತ್ತಿರುವುದು ಮಂಜುನಾಥಪುರ ಕೊಳೆಗೇರಿ ಜನರಲ್ಲಿ ಸಂತಸ
ತಂದಿದೆ. ತಮಗೆ ಎಷ್ಟೇ ಕಷ್ಟವಿದ್ದರೂ ಅದನ್ನು ಬದಿಗೊತ್ತಿ ಹೆಣ್ಣು ಮಕ್ಕಳಿಗೆ ಶಿಕ್ಷಣ
ಕೊಡಿಸಿ ಅನಿತಾ ಲಕ್ಷ್ಮಿಯಂತೆ ಅಧಿಕಾರಿಯನ್ನಾಗಿ ಮಾಡಬೇಕೆಂಬ ನಿಲುವು ಈಗ ಬಡಾವಣೆಯ
ಜನತೆಯಲ್ಲಿ ಬಂದಿದೆ.
ಸಾಧನೆ ಮಾಡುವಲ್ಲಿ ಸಹಕರಿಸಿದ ಹೆತ್ತ ತಾಯಿ ಮತ್ತು ಕೈ ಹಿಡಿದ ಪತಿ ಮತ್ತು
ಕುಟುಂಬದವರನ್ನು ಅನಿತಾ ನೆನೆಯುತ್ತಾರೆ. ನನ್ನಂತೆಯೇ ಬಡಾವಣೆಯ ಹೆಣ್ಣು ಮಕ್ಕಳು ಸಾಧನೆ
ಮಾಡಬೇಕು.
ಅದಕ್ಕಾಗಿ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಬಡಾವಣೆಯಲ್ಲಿ
ತೆರೆಯಬೇಕೆಂಬ ಹಂಬಲ ಇವರಲ್ಲಿದೆ. ತಮ್ಮ ಕೇರಿಯ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವಂತೆ
ಆತ್ಮವಿಶ್ವಾಸ ತುಂಬುತ್ತಿದ್ದಾರೆ.
ಕಷ್ಟ-ಸುಖವನ್ನು ಬದಿಗೊತ್ತಿ ಹಗಲು-ರಾತ್ರಿ ಅಭ್ಯಾಸ ಮಾಡಿದ್ದರಿಂದಲೇ ಸಾಧನೆ ಮಾಡಲು
ಸಾಧ್ಯವಾಯಿತು. ಹೆತ್ತವರ ಕನಸನ್ನು ನನಸು ಮಾಡಿದ್ದೇನೆ. ಮನೆಯಲ್ಲಿ ಬಡತನ ಇತ್ತು.
ಆದರೆ ಅದು ಸಾಧನೆಗೆ ಅಡ್ಡಿಯಾಗಲಿಲ್ಲ. ತಾಯಿ-ಪತಿ ಇಬ್ಬರು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತರು. ಛಲ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು.
ಹಿಡಿದ ಕೆಲಸವನ್ನು ಕೊನೆ ಮುಟ್ಟುವವರೆಗೂ ಬಿಡಬಾರದು. ರಾಜ್ಯದ ಯಾವುದೇ ಮೂಲೆಗೂ
ಅಧಿಕಾರಿಯಾಗಿ ಹೋದರೂ ತಾಯಿ, ಹುಟ್ಟಿದ ಮನೆಯನ್ನು ಮರೆಯಲಾರೆ ಎಂದು ಹೇಳುವಾಗ ಅನಿತಾ ಅವರ
ಕಣ್ಣಂಚಿನಲ್ಲಿ ಆನಂದಬಾಷ್ಪ ಇಣುಕಿತು. ಛಲ, ದೃಢ ವಿಶ್ವಾಸ ಇದ್ದರೆ ಏನು ಬೇಕಾದರೂ
ಸಾಧಿಸಬಹುದು ಎನ್ನುವುದಕ್ಕೆ ಅನಿತಾ ಲಕ್ಷ್ಮಿ ಅವರೇ ಸಾಕ್ಷಿ.
ಓದಿ ವಿದ್ಯಾವಂತರಾಗಿ ಒಳ್ಳೆಯ ಹುದ್ದೆ ಅಲಂಕರಿಸಲಿ ಎಂದು ಪೋಷಕರು ಮಕ್ಕಳಿಗೆ ಎಲ್ಲ
ಸವಲತ್ತುಗಳನ್ನು ಒದಗಿಸುತ್ತಾರೆ. ಆದರೆ ಬಡತನದಲ್ಲಿ ಬೆಂದು ಯಾರ ಸಹಾಯವಿಲ್ಲದೆ ಕಠಿಣ
ಅಭ್ಯಾಸ ಮಾಡಿ ಸಾಧನೆ ಮಾಡಿರುವ ಅನಿತಾಲಕ್ಷ್ಮಿ ಎಲ್ಲರಿಗೆ ಮಾದರಿಯಾಗಿದ್ದಾರೆ.
Thanks to Prajavani Paper.
ಜ್ಞಾನ ಮುಖಿ
ಇಲ್ಲಿರುವುದು ಎಲ್ಲೆಡೆಯೂ ಇದೆ. ಎಲ್ಲಿಯೂ ಇರದ ವಿಶಿಷ್ಟತೆ ಇಲ್ಲಿದೆ.
Saturday, 12 May 2012
Monday, 30 April 2012
ಜೀವನ್ಮುಖಿ
ಚಹಾ ಕುಡಿಯುವಾಗ, ಊಟಕ್ಕೆ ಕುಳಿತಾಗ ಯಾವುದಾದರೊಂದು ಮ್ಯಾಗಜೀನ್, ನ್ಯೂಸ್ ಪೇಪರ್ ಅಥವಾ ಕೈಗೆ ಸಿಕ್ಕ ಪುಸ್ತಕವೊಂದನ್ನು ಕೈಗೆತ್ತಿಕೊಂಡು ಕುಳಿತುಬಿಡುವುದು ನನ್ನ ದುರಭ್ಯಾಸ (?).ಅದಿರಲಿ, ನಿನ್ನೆ ಹೀಗೆ ಕುಳಿತಾಗ `ವಿಜಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ಕಥೆಯೊಂದರ ಮೇಲೆ ಅನಾಯಾಸವಾಗಿ ಕಣ್ಣು ಹೊರಳಾಡಿತು. `ಜೀವನ್ಮುಖಿ' ತಲೆಬರಹದ ಕಥೆಯೊಂದು ಇಷ್ಟವಾಯಿತು. ಜೀವನದಲ್ಲಿ ದುಡ್ಡೊಂದೇ ಮುಖ್ಯ ಎನ್ನುವವರಿಗೆ ನೀತಿಪಾಠದಂತಿದೆ ಈ ಕಥೆ. ಜೀವನದಲ್ಲಿ ದುಡ್ಡು ಮುಖ್ಯ ನಿಜ. ಆದರೆ ಅದಕ್ಕಿಂತ ಮುಖ್ಯವಾದದ್ದು ಇನ್ನೊಂದು ಇದೆ. ಅದೇ - ಮಾನವೀಯ ಮೌಲ್ಯಗಳು. ಆದರ್ಶಗಳು, ತತ್ವ-ಸಿದ್ಧಾಂತಗಳು. ಹೌದು, ಬೇಕಾದರೆ ಒಮ್ಮೆ ಹಿಂತಿರುಗಿ ನೋಡಿ. ಇತಿಹಾಸದಲ್ಲಿ ಆಗಿ ಹೋದ ಮಹಾನ್ ಮಹಾನ್ ವ್ಯಕ್ತಿಗಳೆಲ್ಲ ತತ್ವ-ಸಿದ್ಧಾಂತಗಳಿಗೆ, ಮಾನವೀಯ ಮೌಲ್ಯಗಳಿಗೆ ಬೆಲೆಕೊಟ್ಟರು. ಅದಕ್ಕೆ ಅವರೆಲ್ಲ ಅಜರಾಮರಾದರು. ಇತಿಹಾಸದಲ್ಲಿ ಅಸಂಖ್ಯ ಸಂಖ್ಯೆಯಲ್ಲಿ ಶ್ರೀಮಂತರಾಗಿ ಹೋಗಿದ್ದಾರೆ. ಆದರೆ ಅವರ ಯಾರ ಹೆಸರೂ ನಮಗೆ ತಿಳಿದಿಲ್ಲ ಅವರೆಲ್ಲ ಕತ್ತಲ ಮರೆಯಲ್ಲಿ ಮರೆಯಾಗಿ ಹೋಗಿದ್ದಾರೆ. ದುಡ್ಡೆಂಬ ಮಾಯಾಜಿಂಕೆಯ ಹಿಂದೆ ಓಡಿ ಹೋದವರಾರು ನೆಮ್ಮದಿಯಾಗಿ ಬದುಕಿಲ್ಲ. ಬದುಕುವುದೂ ಇಲ್ಲ. ಆದಾಗ್ಯೂ ನಾವೆಲ್ಲ ದುಡ್ಡು ದುಡ್ಡು ಎಂದು ಹಂಬಲಿಸಿವುದೇತಕೋ....? ಹಾಗಾದರೆ ಜೀವನದಲ್ಲಿ ದುಡ್ಡು ಮುಖ್ಯ ಅಲ್ಲವೇ ಅಲ್ಲವಾ...? ದುಡ್ಡು ಗಳಿಸಬಾರದಾ...? ಖಂಡಿತ ಗಳಿಸಬೇಕು ನಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಗಳಿಸಬೇಕು. ನನ್ನ ಮಕ್ಕಳ ಜೀವನಕ್ಕೂ ದುಡ್ಡು ಕೂಡಿಡ್ತೀನಿ, ಮುಂದೆ ನನ್ನ ಏಳೆಂಟು ತಲೆಮಾರುಗಳು ಕುಳಿತು ತಿನ್ನುವಷ್ಟು ದುಡ್ಡು ಸಂಪಾದಿಸ್ತೀನಿ ಅಂತ ಹೊರಟರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ನಮಗೆ ನಮ್ಮ ತಂದೆಯ ಮೇಲೆ ಇದ್ದಷ್ಟು ಪ್ರೀತಿ ನಮ್ಮ ತಾತನ ಮೇಲಿರುವುದಿಲ್ಲ. ತಾತನ ಮೇಲೆ ಇದ್ದಷ್ಟು ಪ್ರೀತಿ ಮುತ್ತಾತನ ಮೇಲೆ ಇರುವುದಿಲ್ಲ. ಇನ್ನೂ ಮುತ್ತಾತನ ಮೇಲೆ ಪ್ರೀತಿ ಇರುವುದಿರಲಿ ಆತ ಯಾರು, ಹೇಗಿದ್ದ ಏನು ಹೆಸರು ಎಂಬುದೇ ಸರಿಯಾಗಿ ತಿಳಿದಿರುವುದಿಲ್ಲ. ನಮ್ಮ ಪಾಲಿಗೆ ಆತ ಅಸ್ಪಷ್ಟ ಚಿತ್ರ. ಇದೇ ಮುಂದೆ ನಮಗೂ ಅನ್ವಯಿಸುತ್ತದೆ ಅಲ್ಲವಾ...? ಹಾಗಾದರೆ ಯಾರಿಗಾಗಿ ಈ ಗಳಿಕೆ? ಯಾರ ಮೆಚ್ಚಿಸುವುದಕ್ಕಾಗಿ ಈ ದುಡಿಕೆ? ಬಿಲೀವ್ಹ್ ಮಿ ಫ್ರೆಂಡ್ಸ್ ಈ ಜಗತ್ತಿನಲ್ಲಿ ತತ್ವ-ಸಿದ್ಧಾಂತಗಳನ್ನು ನೆಚ್ಚಿ ಬದುಕಿದವರು ಇದುವರೆಗೂ ಸತ್ತಿಲ್ಲ. ಆದರೆ ಹಣವನ್ನೇ ನೆಚ್ಚಿ ಬದುಕಿದವರ ಹೆಸರೇ ನಮಗೆ ತಿಳಿದಿಲ್ಲ. ದುಡ್ಡಿಗೆ ದ್ವಿತೀಯ ಆದ್ಯತೆ ನೀಡೋಣ. ಮಾನವೀಯ ಮೌಲ್ಯಗಳಿಗೆ, ತತ್ವ-ಸಿದ್ಧಾಂತಗಳಿಗೆ ಪ್ರಥಮಾದ್ಯತೆ ನೀಡೋಣ. ಅಂದಾಗ ಮಾತ್ರ ಸಾರ್ಥಕ ಬದುಕು ಬಾಳಿದಂಥ ನೆಮ್ಮದಿ ನಮ್ಮದಾಗುತ್ತದೆ.
ಹಣದ ಬೆನ್ನುಹತ್ತಿ ಹೋದ ವೈದ್ಯನೊಬ್ಬನ ಕಥೆ-ವ್ಯಥೆಯನ್ನು ವಿವೇಕಾನಂದ ಕಾಮತ್ ಅವರು ಸುಂದರವಾಗಿ ಇಲ್ಲಿ ಒಡಮೂಡಿಸಿದ್ದಾರೆ. ಒಮ್ಮೆ ಓದಿಕೊಳ್ಳಿ.
ನಿಮ್ಮವ
ಜ್ಞಾನಮುಖಿ
ಹಣದ ಬೆನ್ನುಹತ್ತಿ ಹೋದ ವೈದ್ಯನೊಬ್ಬನ ಕಥೆ-ವ್ಯಥೆಯನ್ನು ವಿವೇಕಾನಂದ ಕಾಮತ್ ಅವರು ಸುಂದರವಾಗಿ ಇಲ್ಲಿ ಒಡಮೂಡಿಸಿದ್ದಾರೆ. ಒಮ್ಮೆ ಓದಿಕೊಳ್ಳಿ.
ನಿಮ್ಮವ
ಜ್ಞಾನಮುಖಿ
Saturday, 28 April 2012
Tuesday, 10 April 2012
Monday, 9 April 2012
ಮೀನಾ ನಾಟಕ ಮತ್ತು ಬೀಳ್ಕೊಡುವ ಸಮಾರಂಭ
ಇತ್ತೀಚೆಗೆ ನಮ್ಮ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಒತ್ತನ್ನು ಕುರಿತು `ಮೀನಾ' ಎಂಬ ಬೀದಿನಾಟಕವನ್ನು ಏರ್ಪಡಿಸಿದ್ದೆವು. ಹಾಗೂ ೭ನೇ ವರ್ಗದ ವಿದ್ಯಾರ್ಥಿ/ನಿಯರ ಬೀಳ್ಕೊಡುವ ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ತದನಿಮಿತ್ಯ ಆ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಮುಖ್ಯ ಗುರುಗಳಾದ ಶ್ರೀಮತಿ ಪಿ.ಆರ್.ಚವ್ಹಾಣ ಅವರಿಂದ ಗಿಳಿ ಪಾತ್ರದಾರಿ ವಿದ್ಯಾ ಕಾಳೆ ಇವಳಿಗೆ ಪ್ರಶಸ್ತಿ ಫಲಕ
ಬೀಳ್ಕೊಡುವ ಸಮಾರಂಭದಂದು ನಮ್ಮ ಮುದ್ದು ವಿದ್ಯಾರ್ಥಿಗಳು ನನಗೆ ಹೂ ನೀಡುತ್ತಿರುವುದು. ಮುಖದಲ್ಲಿ ನಗೆಯಿತ್ತಷ್ಟೆ, ಆದರೆ ಬೀಳ್ಕೊಡುವ ಸಂಗತಿ ಹೃದಯ ಭಾರವಾಗಿಸಿತ್ತು.
ಮುಖ್ಯ ಗುರುಗಳಾದ ಶ್ರೀಮತಿ ಪಿ.ಆರ್.ಚವ್ಹಾಣ ಅವರಿಂದ ಗಿಳಿ ಪಾತ್ರದಾರಿ ವಿದ್ಯಾ ಕಾಳೆ ಇವಳಿಗೆ ಪ್ರಶಸ್ತಿ ಫಲಕ
Sunday, 25 March 2012
ಗೆದ್ದೇ ಗೆಲ್ಲುವೆವು - ಕೃತಿ ಪರಿಚಯ
ಪ್ರಿಯ ಓದುಗರೇ,
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಒಂದು ಗಂಟೆ ನಿದ್ರಿಸಿದರೂ ಜಗತ್ತು ನಮ್ಮನ್ನು ಬಿಟ್ಟು ನೂರಾರು ಕಿಲೋಮೀಟರ್ ಮುಂದಕ್ಕೆ ಓಡಿರುತ್ತದೆ. ಜೀವನದ ಪ್ರತಿ ಹಂತದಲ್ಲೂ ಪ್ರತಿ ಕ್ಷಣದಲ್ಲೂ ನಾವು ಸ್ಪರ್ಧೆಯನ್ನು ಎದುರಿಸುತ್ತಿದ್ದೇವೆ. ಅದರಲ್ಲೂ ಅಧ್ಯಯನ ನಿರತ ವಿದ್ಯಾರ್ಥಿ/ಸ್ಪರ್ಧಾರ್ಥಿಗಳಂತೂ ಪ್ರತಿ ಕ್ಷಣವೂ ಸ್ಪರ್ಧಾಕಣದಲ್ಲಿರಬೇಕಾಗುತ್ತದೆ. ಹೀಗೆ ಸ್ಪರ್ಧಾಕಣದಲ್ಲಿದ್ದು ಸ್ಪರ್ಧೆಯನ್ನು ಎದುರಿಸುವುದು ಸುಲಭದ ಮಾತಲ್ಲ. ಎಷ್ಟೋ ಬಾರಿ ನಮಗೆ ಅರಿವಿಲ್ಲದೆಯೇ ಮನಸ್ಸು `ಯಾವನಿಗೆ ಬೇಕು ಈ ಕಾಂಪಿಟೇಶನ್ ಸಾಯ್ಲಿ ಅತ್ಲಾಗೆ' ಎಂದು ಹಾಸಿಗೆ ಹೊದ್ದು ಮಲಗಿಬಿಡುತ್ತದೆ. ಚಿಕ್ಕಚಿಕ್ಕ ಸೋಲು, ನಿರಾಶೆ, ಹತಾಶೆ ಇನ್ನೆಂದು ನಾನು ಪಾಸ್ ಆಗುವುದಿಲ್ಲವೇನೋ ಎಂಬ ಭಾವ ಸದ್ದಿಲ್ಲದೇ ಕಾಡುತ್ತಿರುತ್ತೆ. ಎಷ್ಟೋ ಬಾರಿ ಸ್ಪರ್ಧೆಯನ್ನು ಹೇಗೆ ಎದುರಿಸಬೇಕು ಎಂಬ ಮಾರ್ಗದರ್ಶನವೇ ಸರಿಯಾಗಿ ಲಭ್ಯವಾಗಿರುವುದಿಲ್ಲ. ನೆರೆ-ಹೊರೆಯವರ ಕೊಂಕು ನುಡಿ, ನಿರುತ್ಸಾಹಗೊಳಿಸುವ ಮಾತುಗಳು, ಒಂದೇ ಎರಡೇ ನಮ್ಮನ್ನು ಸ್ಪರ್ಧೆಯಿಂದ ವಿಮುಖಗೊಳಿಸಲು.... ಆದರೆ ಈ ಹಂತದಲ್ಲಿ ಪ್ರತಿಯೊಬ್ಬರಿಗೂ ಸಂಜೀವಿನಿಯಂತೆ ಒದಗಿಬರುವುದೇ - `ಗೆದ್ದೇ ಗೆಲ್ಲುವೆವು' ಕೃತಿ. ನಾಡಿನ ಹೆಸರಾಂತ ಲೇಖಕರಾದ ಹಾಗೂ ನನ್ನ ಆತ್ಮೀಯ ಮಿತ್ರ (ಹಾಗೆಂದು ನಾ ತಿಳಿದುಕೊಂಡಿದ್ದೇನೆ) (ಹಿರಿಯ)ರಾದ ಶ್ರೀ ಮಂಜುನಾಥ ಬೇದ್ರೆಯವರು ಈ ಕೃತಿಯ ಲೇಖಕರು. ಊಟಕ್ಕೆ ಕುಳಿತಿರುವವರಿಗೆ ಏನೇನು ಬಡಿಸಬೇಕು? ಎಷ್ಟು ಬಡಿಸಬೇಕು? ಎಂಬುದನ್ನು ತಿಳಿದ ಪಾಕಶಾಸ್ತ್ರ ಪ್ರವೀಣರಂತೆ ಬೇದ್ರೆ ಮಂಜುನಾಥ ಅವರು ಸ್ಪರ್ಧಾರ್ಥಿಗಳಿಗೆ ಉಪಯುಕ್ತವಾಗುವಂತೆ - ಐ.ಎ.ಎಸ್., ಐ.ಪಿ.ಎಸ್. ಕೆ.ಎ.ಎಸ್.ನಂತಹ ಪರೀಕ್ಷೆಗಳಿಗೆ ಹೇಗೆ ಸಿದ್ಧರಾಗುವುದು? ಕೆ.ಎ.ಎಸ್.ನ ಹೊಸ ಪಠ್ಯಕ್ರಮ ಏನು? ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ? ಉಪಯುಕ್ತವಾದ ವೆಬ್‍ಸೈಟ್‍ಗಳು ಯಾವುವು? ಹೀಗೆ ಹತ್ತು ಹಲವು ವಿಷಯಗಳನ್ನು ಸ್ಪರ್ಧಾರ್ಥಿಗಳಿಗೆ ಉಣಬಡಿಸಿದ್ದಾರೆ.. ಪ್ರತಿಯೊಬ್ಬ ಸ್ಪರ್ಧಾರ್ಥಿಯ ಕೈಚೀಲದಲ್ಲಿ, ಗ್ರಂಥಾಲಯದಲ್ಲಿ ಇರಲೇಬೇಕಾದ ಪುಸ್ತಕ ಇದು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಹಾಗಾದರೆ ಇನ್ನೇಕೆ ತಡ...? ಈಗಲೇ ಪುಸ್ತಕ ತರಿಸಿಕೊಳ್ಳಿ. ಓದಿ ಮುಗಿಸುವದರೊಳಗೆ ನಿಮ್ಮಲಿ ನವ ಚೈತನ್ಯವೊಂದು ಮೂಡಿರುತ್ತದೆ. ಪ್ರಾಮಿಸ್........
Gedde Gelluvevu - We Will Win - A Handbook on Career Guidance and Personality Development by Bedre Manjunath
Gedde Gelluvevu - We Will Win - A Handbook on Career Guidance and Personality Development by Bedre Manjunath
Gedde Gelluvevu - We Will Win - A Handbook on Career Guidance and Personality Development by Bedre Manjunath
Published by Navakarnataka Publications, Bangalore Pages: 216 + 4 , Price: 100/-
Copies are available from all Navakarnataka Book Stores, Exhibition Outlets, Leading Book Stalls, Bus-Stand Book Depots and also from
www.flipkart.com
WWW
- WE WILL WIN. ಗೆದ್ದೇ ಗೆಲ್ಲುವೆವು! ಹೇಗೆ? ಗೆಲವಿನ ಗುಟ್ಟನ್ನು ಹಂಚಿಕೊಳ್ಳುವ
ಕೃತಿ ಇದು. ಎಂಪ್ಲಾಯಬಿಲಿಟಿ ಸ್ಕಿಲ್ಸ್ - ಪೂರ್ವಸಿದ್ಧತೆ, ಸ್ಪರ್ಧಾತ್ಮಕ
ಪರೀಕ್ಷೆಗಳು, ಕಲಿಕೆ - ಗಳಿಕೆಯ ಕೋರ್ಸ್‌ಗಳು, ಅತ್ಯುಪಯುಕ್ತ ವೆಬ್‌ಸೈಟ್ ಮತ್ತು
ಪುಸ್ತಕಗಳು ಹಾಗೂ ವ್ಯಕ್ತಿತ್ವ ವಿಕಾಸ ಮತ್ತು ಯಶಸ್ಸಿನ ಕಥೆಗಳು ಎಂಬ ಐದು
ಭಾಗಗಳಲ್ಲಿ, 114 ಅಧ್ಯಾಯಗಳಲ್ಲಿ ಸಂಕಲಿತವಾಗಿರುವ "ಗೆದ್ದೇ ಗೆಲ್ಲುವೆವು -
ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನ, ಹೊಸ ಹೊಸ ಕೋರ್ಸ್‌ಗಳ ಮಾಹಿತಿ
ಸಾಹಿತ್ಯ ಕೈಪಿಡಿ" ಕನ್ನಡದಲ್ಲಿ ದೊರೆಯುವ
ಏಕೈಕ ಸಮಗ್ರ ವೃತ್ತಿ ಮಾರ್ಗದರ್ಶಿ ಮಾಹಿತಿ ಸಾಹಿತ್ಯ ಕೃತಿ. ಎಂಪ್ಲಾಯಬಿಲಿಟಿ
ಸ್ಕಿಲ್ಸ್! ಐ.ಕ್ಯು., ಇ.ಕ್ಯು., ವಿ.ಕ್ಯು., ಕೆ.ಕ್ಯು., ಜಿ.ಕೆ.ಕ್ಯು., ಸಿ.ಕ್ಯು.,
ಮೊದಲಾದ ಸಾಮರ್ಥ್ಯಗಳು, ಎಸ್.ಕ್ಯು., ಸಿ.ವಿ./ ರೆಸ್ಯೂಮೆ / ಬಯೋಡಾಟಾ ಹೇಗಿರಬೇಕು ?
ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ದಿನಪತ್ರಿಕೆಗಳೇ ದಾರಿದೀಪ, ಎಸ್.ಡಿ.ಎ. /
ಎಫ್.ಡಿ.ಎ./ಕೆ.ಇ.ಎಸ್./ಕೆ.ಎ.ಎಸ್./
ಮೂಲ : ಬೇದ್ರೆ ಫೌಂಡೇಶನ್ ಬ್ಲಾಗ್ www.bedrefoundation.blogspot.in
Published by Navakarnataka Publications, Bangalore Pages: 216 + 4 , Price: 100/-
Copies are available from all Navakarnataka Book Stores, Exhibition Outlets, Leading Book Stalls, Bus-Stand Book Depots and also from
www.flipkart.com
WWW
- WE WILL WIN. ಗೆದ್ದೇ ಗೆಲ್ಲುವೆವು! ಹೇಗೆ? ಗೆಲವಿನ ಗುಟ್ಟನ್ನು ಹಂಚಿಕೊಳ್ಳುವ
ಕೃತಿ ಇದು. ಎಂಪ್ಲಾಯಬಿಲಿಟಿ ಸ್ಕಿಲ್ಸ್ - ಪೂರ್ವಸಿದ್ಧತೆ, ಸ್ಪರ್ಧಾತ್ಮಕ
ಪರೀಕ್ಷೆಗಳು, ಕಲಿಕೆ - ಗಳಿಕೆಯ ಕೋರ್ಸ್‌ಗಳು, ಅತ್ಯುಪಯುಕ್ತ ವೆಬ್‌ಸೈಟ್ ಮತ್ತು
ಪುಸ್ತಕಗಳು ಹಾಗೂ ವ್ಯಕ್ತಿತ್ವ ವಿಕಾಸ ಮತ್ತು ಯಶಸ್ಸಿನ ಕಥೆಗಳು ಎಂಬ ಐದು
ಭಾಗಗಳಲ್ಲಿ, 114 ಅಧ್ಯಾಯಗಳಲ್ಲಿ ಸಂಕಲಿತವಾಗಿರುವ "ಗೆದ್ದೇ ಗೆಲ್ಲುವೆವು -
ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನ, ಹೊಸ ಹೊಸ ಕೋರ್ಸ್‌ಗಳ ಮಾಹಿತಿ
ಸಾಹಿತ್ಯ ಕೈಪಿಡಿ" ಕನ್ನಡದಲ್ಲಿ ದೊರೆಯುವ
ಏಕೈಕ ಸಮಗ್ರ ವೃತ್ತಿ ಮಾರ್ಗದರ್ಶಿ ಮಾಹಿತಿ ಸಾಹಿತ್ಯ ಕೃತಿ. ಎಂಪ್ಲಾಯಬಿಲಿಟಿ
ಸ್ಕಿಲ್ಸ್! ಐ.ಕ್ಯು., ಇ.ಕ್ಯು., ವಿ.ಕ್ಯು., ಕೆ.ಕ್ಯು., ಜಿ.ಕೆ.ಕ್ಯು., ಸಿ.ಕ್ಯು.,
ಮೊದಲಾದ ಸಾಮರ್ಥ್ಯಗಳು, ಎಸ್.ಕ್ಯು., ಸಿ.ವಿ./ ರೆಸ್ಯೂಮೆ / ಬಯೋಡಾಟಾ ಹೇಗಿರಬೇಕು ?
ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ದಿನಪತ್ರಿಕೆಗಳೇ ದಾರಿದೀಪ, ಎಸ್.ಡಿ.ಎ. /
ಎಫ್.ಡಿ.ಎ./ಕೆ.ಇ.ಎಸ್./ಕೆ.ಎ.ಎಸ್./ ಐ.ಎ.ಎಸ್.
ಪರೀಕ್ಷೆಗಳಿಗೆ ಸಿದ್ಧತೆ ಹೇಗೆ ? ಆದ್ರೆ ಆಡೋಕ್ಬಂದೆ, ಆಗ್ದಿದ್ರೆ ನೋಡೋಕ್ಬಂದೆ
ಅನ್ನೋರಿಗೆಲ್ಲಾ ಈ ಐ.ಎ.ಎಸ್./ಐ.ಎಫ್.ಎಸ್., ಯಂಗ್ ಇಂಡಿಯಾ ಬ್ಯುರೋಕ್ರಸಿ, ನೇಮಕಾತಿ
ಪರೀಕ್ಷೆಗಳು, ವಿಭಿನ್ನವಾಗಿ ಆಲೋಚಿಸಿ - ಯಶಸ್ಸು ಗಳಿಸಿ, ಎಡ್ವರ್ಡ್-ಡ-ಬೋನೋ, ಡಾ.
ಸ್ಪೆನ್ಸರ್ ಜಾನ್ಸನ್, ಪಾಲ್ ಆರ್ಡೆನ್, ಗ್ಲಾಡ್‌ವೆಲ್‌ನ 10,000 ಗಂಟೆಗಳ ಪರಿಶ್ರಮ
ಸೂತ್ರ!, ಸ್ಟೀವ್ ಜಾಬ್ಸ್‌ನ - ಸ್ಟೇ ಹಂಗ್ರಿ, ಸ್ಟೇ ಫೂಲಿಶ್, ದಿ ಲಾಸ್ಟ್
ಲೆಕ್ಚರ್... ಒಹ್! ಏನೆಲ್ಲಾ ಅಡಗಿದೆ ಇಲ್ಲಿ! ಶಿಕ್ಷಕರು, ವಿದ್ಯಾರ್ಥಿಗಳು,
ಸಂಶೋಧನಾರ್ಥಿಗಳು, ಯಶಸ್ಸಿನ ಬೆನ್ನು ಹತ್ತಿರುವ ಸ್ಪರ್ಧಾರ್ಥಿಗಳ ಆಪ್ತ ಸಂಗಾತಿ
ಇದು. ಕ್ವಿಜ್, ಅಡ್ವೆಂಚರ್,ಕೆರೀರ್ ಗೈಡೆನ್ಸ್, ಸ್ಕಿಲ್ ಟ್ರೈನಿಂಗ್, ಇಂಗ್ಲಿಷ್,
ವ್ಯಕ್ತಿತ್ವ ವಿಕಾಸ ಮತ್ತು ಸಾಮಾನ್ಯ ಜ್ಞಾನದ ತರಬೇತಿ ಶಿಬಿರಗಳನ್ನು 1985ರಿಂದ
ಸಂಘಟಿಸುತ್ತಿರುವ, ಸ್ಪರ್ಧಾ ಮಾಹಿತಿಯ ಅಂಕಣ ಬರಹಗಳು ಮತ್ತು 75ಕ್ಕೂ ಹೆಚ್ಚು
ಕೃತಿಗಳ ಮೂಲಕ ಯುವಜನರಿಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತಿರುವ ಬೇದ್ರೆ ಮಂಜುನಾಥ
ಅವರ ಹಲವು ವರ್ಷಗಳ ಪರಿಶ್ರಮದ ಸಂಕಲನ ಇದು. ಓದಿ. ಓದಿಸಿ. ಯಶಸ್ಸು ನಿಮ್ಮದಾಗಲಿ!
ಮೂಲ : ಬೇದ್ರೆ ಫೌಂಡೇಶನ್ ಬ್ಲಾಗ್ www.bedrefoundation.blogspot.in
ಕೃತಿಯ ಲೇಖಕರು:- ಶ್ರೀ ಮಂಜುನಾಥ ಬೇದ್ರೆ.
Friday, 16 March 2012
ಚೈತನ್ಯ ಹೆಗಡೆಯವರ ಲೇಖನ
ವಾಸ್ತವ ಸಂಗತಿಗಳ ಸೂಕ್ಷ್ಮತೆಯನ್ನು ಶ್ರೀ ಚೈತನ್ಯ ಹೆಗಡೆಯವರು ಎಳೆ ಎಳೆಯಾಗಿ ಈ ಲೇಖನದಲ್ಲಿ ಬಿಡಿಸಿಟ್ಟಿದ್ದಾರೆ. ಒಮ್ಮೆ ಓದಿ ನೋಡಿ..
Subscribe to:
Posts (Atom)















